ಗೋಡ್ಸೆ ಹೀರೋ ಅಲ್ಲ ಎಂದ ಆರೆಸ್ಸೆಸ್ ಚಿಂತಕ
ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಂ ಗೋಡ್ಸೆ ಹೀರೋ ಆಗಲು ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಚಿಂತಕ...

Published On :
ನಾಗ್ಪುರ: ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಂ ಗೋಡ್ಸೆ ಹೀರೋ ಆಗಲು ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಚಿಂತಕ ಎಂ.ಜಿ.ವೈದ್ಯ ಹೇಳಿದ್ದು, ಆತನ 66ನೇ ಜನ್ಮದಿನವನ್ನು `ಶೌರ್ಯದಿವಸ' ಎಂದು ಆಚರಿಸುತ್ತಿರುವುದಕ್ಕಾಗಿ ಹಿಂದೂ ಮಹಾಸಭಾ, ಹಿಂದೂ ಸೇನಾ, ಮಹಾರಾಣ ಪ್ರತಾಪ್ ಸಂಘಟನೆಗಳನ್ನು ಟೀಕಿಸಿದ್ದಾರೆ.
ಗೋಡ್ಸೆಗೆ ಗೌರವ ಸಲ್ಲಿಸುವುದನ್ನು ನಾನು ವಿರೋಧಿಸುತ್ತೇನೆ. ಆತ ಕೊಲೆಗಾರ. ಚಿಂತನೆಯ ಹೋರಾಟಗಳು ಚಿಂತನೆಯಲ್ಲೇ ನಡೆಯಬೇಕು. ಗೋಡ್ಸೆಯಂತೆ ಯಾರನ್ನಾದರೂ ಕೊಲ್ಲುವುದು ಸರಿಯಾದುದಲ್ಲ.
ಗಾಂಧಿಯ ಕೊಲೆಯಿಂದ ಹಿಂದುತ್ವ ಬಲಪಡಿಸಲಾಯಿತೆಂದು ಕೆಲವರು ಭಾವಿಸಿರಬಹುದು. ಆದರೆ ಅದು ತಪ್ಪು. ಬದಲಾಗಿ ಅವರು ಹಿಂದುತ್ವವನ್ನು ಅವಮಾನಿಸಿದ್ದಾರೆ ಎಂದು ವೈದ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


